Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಪಂಚಾಂಗವನ್ನು ದಿನ ನಿತ್ಯ ನೋಡಬೇಕು -ಶ್ರೀ ವಿದ್ಯಾ ಸಿಂಧು ಮಾಧವ ತೀರ್ಥ ಸ್ವಾಮೀಜಿ

ಬಳ್ಳಾರಿ: ಪಂಚಾಂಗವನ್ನು ದಿನ ನಿತ್ಯ ನೋಡಬೇಕು, ಇದರಿಂದ ನಿತ್ಯದ ಜೀವನಕ್ಕೆ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಬಹುದು ಎಂದು ಶ್ರೀ ವಿದ್ಯಾ ಸಿಂಧು ಮಾಧವ ತೀರ್ಥ ಸ್ವಾಮೀಜಿ ಅವರು ಹೇಳಿದರು.

ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀ ಸುಶಮಿಂದ್ರ ಮoಗಲ ಭವನದಲ್ಲಿ ಅನೀಲ ಜೋಶಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಲೋಕ ಕಲ್ಯಾಣಕ್ಕಾಗಿ ಶ್ರೀ ಮಹಾಸುದರ್ಶನ ಹೋಮ ಹಾಗೂ ಶ್ರೀ ಗೌತಮ ಸೂರ್ಯ  ಸಿದ್ದಾಂತ  ಪಂಚಾಂಗ ಬಿಡುಗಡೆಗೊಳಿಸಿ ಮಾತನಾಡಿದರು. ವಿವಾಹ, ಜವಳ, ಉಪನಯನ, ಗೃಹಪ್ರವೇಶ ಸೇರಿದಂತೆ ಎಲ್ಲ ಶುಭ ಸಮಾರಂಭಗಳಿಗೆ ಪಂಚಾಂಗ ನೋಡುವುದು ಅತಿ ಮುಖ್ಯವಾಗಿದೆ. ವಿಶೇಷವಾಗಿ ಯಾವುದೇ ಕಾರ್ಯಕ್ರಮಗಳಿರಲಿ ನಕ್ಷತ್ರ ಮುಖ್ಯ, ಕೈಗೊಂಡ ದಿನ ಶುಭವಾಗಿದ್ದರೆ ಎಲ್ಲರಿಗೂ ಒಳ್ಳೆಯದಾಗಲಿದೆ, ಅದಕ್ಕೆ ಪಂಚಾಂಗ ಅತೀ ಮುಖ್ಯವಾಗಿದೆ ಎಂದರು.  ಇದಕ್ಕೂ ಮುನ್ನ  ಹೋಮ ಹಾಗೂ ಪೂರ್ಣಾಹುತಿ ನೆರವೇರಿತು. ನಂತರ  ಶ್ರೀ ವಿದ್ಯಾ ಸಿಂಧು ಮಾಧವ ತೀರ್ಥ ಸ್ವಾಮೀಜಿ ಅವರಿಂದ ಶ್ರೀ ಕೃಷ್ಣನ ಬಲ ಲೀಲೆಗಳ ಕುರಿತು ಉಪನ್ಯಾಸ ನಡೆಯಿತು. ಬದರಿ ನಾರಾಯಣ ದೇಗುಲ ಪ್ರಧಾನ ಅರ್ಚಕರಾದ ಪಂ.ಗುರುರಾಜ್ ಆಚಾರ ಅವರು ಸ್ವಾಮೀಜಿ ಅವರ ಕುರಿತು ಕಿರುಪರಿಚಯ, ನಂತರ  ಸ್ವಾಮೀಜಿ ಅವರು,  ಶ್ರೀ ಮಧ್ವ ವಿಜಯ ಪ್ರಶಸ್ತಿ ವಿಜೇತ, ಜೋತಿಷಿ ರತ್ನ ಗುರುರಾಜ್ ಕುಲಕರ್ಣಿ ಅವರು ಬರೆದ ನೂತನ ವರ್ಷದ ಪಂಚಾಂಗವನ್ನು ಬಿಡುಗಡೆಗೊಳಿಸಿದರು. ನಂತರ ಕು.ವಿಭಾ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು. ಕಲಾವಿದರಾದ ಪವಮಾನ ಅರಳಿಕಟ್ಟಿ, ಪದ್ಮಜಾ ಅರಳಿಕಟ್ಟಿ ಅವರು ತಬಲಾ ಹಾಗೂ ಹಾರ್ಮೋನಿಯಂ ಸಾಥ್ ನೀಡಿದರು. ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಅನುಪಮ, ಬೀ.ಕೆ.ಸುಂದರ್, ಪಂಪಯ್ಯ ಶಾಸ್ತ್ರೀಜಿ, ಗುಂಡಯ್ಯ ಸ್ವಾಮಿ, ಡಾ.ಸಂಜೀವ್ ಪ್ರಸಾದ್, ಹೊಸದಿಗಂತ ಜಿಲ್ಲಾ ವರದಿಗಾರರು ವೆಂಕಟೇಶ ದೇಸಾಯಿ ಕವಿತಾ ವಾದಿರಾಜ, ಪತ್ರಕರ್ತ ನರಸಿಂಹ ಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹೆಸರಾಂತ ಸಂಗೀತ ಗಾಯಕ ಶ್ರೀ ಶೇಷಗಿರಿ ದಾಸ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಚ್.ಹರಿಕುಮಾರ್, ಪಂ.ಅಶೋಕ್ ಕುಲಕರ್ಣಿ, ಡಿ.ಗಿರಿ, ಡಾನಾಪೂರ್ ಶ್ರೀನಿವಾಸ್, ಪಾರ್ಥಸಾರ್ಥಿ, ವಸುಧಾ, ಸತೀಶ್ ದೇಸಾಯಿ, ಡಾ.ಶ್ರೀನಾಥ್,  ಸೇರಿದಂತೆ ಇತರರು ಇದ್ದರು.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?