Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಆಕರ್ಷಕ ಶ್ವಾನ ಪ್ರದರ್ಶನ : ಶುನಕಗಳ ಜಾಣ್ಮೆಗೆ ಮಾರುಹೋದ ಜನ

ಹೊಸಪೇಟೆ(ವಿಜಯನಗರ).ಫೆಬ್ರವರಿ.04: ಹುದುಗಿಸಿಟ್ಟ ಬಾಂಬ್ ಹುಡುಕಿದ ಲೂಸಿ, ಅಪರಾಧಿ ಪತ್ತೆ ಹಚ್ಚಿದ ಬ್ರೂನೋ, ಕದ್ದವಸ್ತು ಕಂಡುಹಿಡಿದ ಸಿಂಬಾ, ಹೀಗೆ ವಿಜಯನಗರ ಜಿಲ್ಲಾ ಪೊಲೀಸ್‌ ಶ್ವಾನದಳದ ಕರ್ತವ್ಯದ ಕರಾಮತ್ತು ಕಣ್ದುಂಬಿ ಕೊಂಡ ಜನರು, ಶುಕುನಗಳ ಜಾಣ್ಮೆಗೆ ಮಾರು ಹೋದರು.

ಈ‌ ಚಿತ್ರಣ ಕಂಡುಬಂದಿದ್ದು, ಕಮಲಾಪುರದ ಹವಾಮಾ ಕಚೇರಿ ಹಿಂಭಾಗದ ಆವರಣದಲ್ಲಿ. ಹಂಪಿ ಉತ್ಸವ -2024ದ ಕಡೆಯ ದಿನ ಭಾನುವಾರ ಆಯೋಜಿಸಲಾದ ಶ್ವಾನ ಪ್ರದರ್ಶನ ಜನರಿದಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿತು.

ಇದೇ ಮೊದಲ ಬಾರಿ ಹಂಪಿ ಉತ್ಸವದ ಶ್ವಾನ ಪ್ರದರ್ಶನದಲ್ಲಿ ಪೊಲೀಸ್ ಶ್ವಾನಗಳು ಭಾಗವಹಿಸಿದ್ದವು. ಒಂದವರೆ ವರ್ಷದ ಬ್ರೂನೋ ಡಾಬರ್‌ಮನ್ ಜಾತಿ ಸೇರಿದ ನಾಯಿ. ಸುಮಾರು 19 ಅಪರಾಧ ಪ್ರಕರಣಗಳಲ್ಲಿ ಬ್ರೂನೋ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಲಾಬ್ರಡಾರ್ ಜಾತಿ ಸೇರಿದ ಎರೆಡು ವರ್ಷದ ಲೂಸಿ ಬಾಂಬ್ ಪತ್ತೆ ಹಚ್ಚುವಲ್ಲಿ ನಿಷ್ಣಾಂತಳು. ಇನ್ನೂ ಇದೇ ಜಾತಿಗೆ ಸೇರಿದ ಸಿಂಬಾ ಒಂದವರೆ ವರ್ಷದವನಾಗಿದ್ದು, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರ ಕಾರ್ಯದಲ್ಲಿ ನೆರವಾಗುತ್ತಾನೆ. ತರಬೇತುದಾರ ಆಜ್ಞೆ ಅನುಸರಿಸಿ ನಡೆಯುವ ಈ ಶ್ವಾನಗಳು ನಿಂತಲ್ಲೇ ನಿಲ್ಲುವುದು, ಕೂರುವುದು, ಹೊರಳುವುದು, ಸಂಜ್ಞೆ ಆಧರಿಸಿ ಬೊಗಳುವುದು, ಗೌರವ ವಂದನೆ ಸಲ್ಲಿಸುವುದು ನೋಡಿದ ಜನ ಬೆರಗಾದರು.

19 ಜಾತಿಯ 66ಕ್ಕೂ ಹೆಚ್ಚು ಶ್ವಾನಗಳು ಭಾಗಿ

ಈ ಬಾರಿಯ ಉತ್ಸವದಲ್ಲಿ 19 ವಿವಿಧ ಜಾತಿಯ ದೇಶಿ ಹಾಗೂ ವಿದೇಶಿ ತಳಿಗಳ 66ಕ್ಕೂ ಹೆಚ್ಚು ಶ್ವಾನಗಳು ತಮ್ಮ ಮಾಲೀಕರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಅತಿ ಎತ್ತರ, ದೊಡ್ಡ ಹಾಗೂ ನೀಳ ಕಾಯದ ಗ್ರೇಟ್ ಡೆನ್, ಚಿಕ್ಕದಾದ ಸಿಟ್ಜ್ ಹಾಗೂ ಪಮೋರಿಯನ್, ಬೇಟೆಗೆ ಹೆಸರಾದ ಮುಧೋಳ, ಕುಟುಂಬಕ್ಕೆ ಪ್ರಿಯವಾದ ಗೋಲ್ಡನ್ ರಿಟ್ರೈವರ್, ಅರ್ಧ ಅಡಿ ಎತ್ತರವಿದ್ದು, ಉದ್ದನೇ ದೇಹದೊಂದಿ ಬಿಲದಲ್ಲಿ ಅವಿತಿರುವ ಇಲಿ, ಮೊಲ ಸೇರಿದಂತೆ ಮುಂತಾದ ಚಿಕ್ಕಪುಟ್ಟ ಪ್ರಾಣಿಗಳ ಭೇಟೆಗೆ ಹೆಸರುವಾಸಿಯಾದ ಡ್ಯಾಶ್ ಹೌಂಡ್, ಶೀತ ವಲಯದಲ್ಲಿ ಮಾನವ ಅತ್ಯಂತ ಉಪಯುಕ್ತ ಸಂಗಾತಿ ಎನಿಸಿದ ಸೈಬಿರಿಯನ್ ಹಸ್ಕಿ, ಯುದ್ದಕ್ಕೆ ಹೆಸರುವಾಸಿಯಾದ ಜರ್ಮನ್ ಶಫರ್ಡ್, ಮಾಲಿಕನಿಗೆ ಅತ್ಯಂತ ನಿಷ್ಠೆಯಿಂದಿರುವ ಡಾಬರ್ ಮನ್, ಭಾರತದಲ್ಲಿ ಜನಪ್ರಿಯ ಹೊಂದಿರುವ ಲ್ಯಾಬ್ರಡಾರ್, ವಿರಳ ಜಾತಿಯ ವಿದೇಶಿ ತಳಿಯ ಸೇಂಟ್ ಬರ್ನರ್ಡ್, ಪಾಕಿಸ್ತಾನದ ಬುಲ್ಲಿ, ಬೀಗಲ್, ಕಾಕಸ್ ಫನಲ್, ಕೇನ್ ಕೋರ್ಸ್ ಸೇರಿದಂತೆ ಹಲವು ಶ್ವಾನಗಳು ಸ್ಪರ್ಧೆಯ ವಿಶೇಷ ಎನಿಸಿದವು. ತಳಿಗಳ ವಾರು ಮೊದಲು ಸ್ಪರ್ಧೆ ನಡೆಸಿ ಶ್ವಾನಗಳನ್ನು ಆಯ್ಕೆ ಮಾಡಲಾಯಿತು. ತಳಿವಾರು ಪ್ರಥಮ ಸ್ಥಾನ ಪಡೆದ ಶ್ವಾನಗಳನ್ನು ಕೊನೆ ಹಂತ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ಸ್ಪರ್ಧೆ ಅತ್ಯಂತ ತುರುಸಿನಿಂದ ಕೂಡಿತ್ತು.

ಚಾಂಪಿಯನ್ ಆಪ್ ಚಾಂಪಿಯನ್ ಪಟ್ಟ ಪಡೆದ ಗ್ರೇಟ್ ಡೆನ್

ಹಂಪಿ ಉತ್ಸವ-2024ದ ಶ್ವಾನ ಪ್ರದರ್ಶನದಲ್ಲಿ ಹೊಸಪೇಟೆ ನಗರದ ವೀರು ಅವರ ಗ್ರೇಟ್ ಡೆನ್ ತಳಿಗೆ ಸೇರಿದ ಶ್ವಾನ ಚಾಂಪಿಯನ್ ಆಫ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಪ್ರಥಮ ಸ್ಥಾನ ಪಡೆದ ಈ ಶ್ವಾನ ರೂ.10,000 ನಗದು ಪುರಸ್ಕಾರವನ್ನು ಪಡೆದಿದೆ. ಮರಿಯಮ್ಮನಹಳ್ಳಿಯ ಸತೀಶ್ ಚಿದ್ರಿಯವರ ಡಾಬರ್ ಮನ್ ದ್ವೀತಿಯ ಸ್ಥಾನ ಪಡೆಯುವುದರೊಂದಿಗೆ ರೂ.7,500 ನಗದು ಬಹುಮಾನಕ್ಕೆ ಪಾತ್ರವಾಯಿತು. ಇನ್ನೂ ಮರಿಯಮ್ಮನಹಳ್ಳಿಯ ಬಸವರಾಜ್ ಅವರ ಮುದೋಳ ಹೌಂಡ್ ತೃತೀಯ ಸ್ಥಾನ ಪಡೆದು ರೂ.5000 ನಗದು ತನ್ನದಾಗಿಸಿಕೊಂಡಿತು. ಶ್ರೇಯಸ್ ಅವರ ಟಾಯ್ ಪಾಪ್, ಶಿವಪ್ರಸಾದ್ ಅವರ ಸೈಬೀರಿಯನ್ ಹಸ್ಕಿ, ಕಾರ್ತಿಕ್ ಅವರ ಬೀಗಲ್, ಲಕ್ಷ್ಮೀ ನಾರಾಯಣ ಅವರ ಸಿಡ್ಜು ತೀರ್ಪುಗಾರರ ಮೆಚ್ಚುಗೆ ಪಡೆದು, ಪ್ರಶಂಸೆಗೆ ಪಾತ್ರವಾದವು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ.ಬಸವಾರಾಜ್ ಬಾಳಣ್ಣನವರ್, ಶಿವಮೊಗ್ಗ ಪಾಲಿ ಕ್ಲೀನಿಕ್‌ನ ಡಾ.ಬಸವರಾಜ ಹೂಗಾರ್, ಹಿರಿಯ ಪಶುವೈದ್ಯಾಧಿಕಾರಿ ಡಾ.ಶ್ರೀಪಾದ್ ರಾವ್ ಶ್ವಾನ ಪ್ರದರ್ಶನ ಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಮೂಲ ಜಾತಿ ತಳಿ, ದೇಹದಾರ್ಡ್ಯತೆ, ಚುರುಕುತನ ಮಾಲಿಕರೊಂದಿಗೆ ಅವಿನಾಭ ಸಂಬಂಧದ ಆಧಾರದ ಮೇಲೆ ವಿಜೇತ ಶ್ವಾನಗಳನ್ನು ಆಯ್ಕೆ ಮಾಡಲಾಯಿತು.

ಪಶುಸಂಗೋಪನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಪಾಮ್‌ಸಿಂಗ್, ಸಹಾಯಕ ನಿರ್ದೇಶಕ ಡಾ.ಬೆಣ್ಣಿ ಬಸವರಾಜ, ಪಶು ವೈದ್ಯಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ್, ಡಾ.ಯುಗೇಂದ್ರ ಮಾನ್ವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?