Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜಕೀಯ ಸುದ್ದಿ

ಗ್ಯಾರಂಟಿಗೆ ಎಸ್‌ಸಿ, ಎಸ್‌ಟಿ ಸಮುದಾಯದ ಹಣ ದುರ್ಬಳಕೆ ಮಾಡಿ ಜನರನ್ನು ಬಿಕ್ಷುಕರನ್ನಾಗಿ ಮಾಡಿದೆ: ಮೈಸೂರಲ್ಲಿ ಶ್ರೀರಾಮುಲು ಕಿಡಿ

ಮೈಸೂರು: ತಳ ಸಮುದಾಯದ ಅಭಿವೃದ್ಧಿ ಕಡೆಗಣಿಸಿ, ಇದರ ಅನುದಾನವನ್ನು ಗ್ಯಾರಂಟಿಗೆ ಬಳಸಿ, ಜನರನ್ನು ಬಿಕ್ಷುಕರನ್ನಾಗಿ ಮಾಡಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಟೀಕಿಸಿದ್ದಾರೆ.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಶ್ರೀರಾಮುಲು ಈ ಆರೋಪಗಳನ್ನು ಮಾಡಿದ್ದಾರೆ. ಈ ಸಭೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಭಾಗದ ಹಿಂದುಳಿದ ವರ್ಗಗಳ ಬಿಜೆಪಿ ಮುಖಂಡರು ಭಾಗವಹಿಸಿದ್ದರು. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಮತ್ತು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕೂಡ ಅವರು ಘೋಷಿಸಿದ್ದಾರೆ.

25 ಸಾವಿರ ಕೋಟಿ ರೂ ಅನುದಾನ ಬಳಕೆ :

ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ 24% ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದೆ. ಒಟ್ಟು ಸುಮಾರು 25,000 ಕೋಟಿ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. 2023-24ರಲ್ಲಿ 11,000 ಕೋಟಿ ಮತ್ತು 2024-25ರಲ್ಲಿ 14,000 ಕೋಟಿ ರೂಪಾಯಿಗಳನ್ನು ಬೇರೆಡೆಗೆ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ. “ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ 24% ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದನಂತರ ತಳ ಸಮುದಾಯದ ಬಡವರ ಹಣದ ಜೊತೆ ಚೆಲ್ಲಾಟವಾಡಿದೆ.” ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ತೀವ್ರವಾಗಿ ಟೀಕಿಸಿದ್ದು, “ವಿವಿಧ ನಿಗಮಗಳ ಹಣವನ್ನು ರಾಜ್ಯ ಸರ್ಕಾರ ಖಾಲಿ ಮಾಡಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಯಾಮಾರಿಸುತ್ತಿದೆ.” ಎಂದು ಹೇಳಿದರು. “ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದ ಖಜಾನೆ ಖಾಲಿಯಾಗಿದೆ. ಈ ಮೂಲಕ ಜನರನ್ನು ಭಿಕ್ಷುಕರನ್ನಾಗಿಸಿದೆ‌. ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಸರ್ಕಾರ ವರ್ತಿಸುತ್ತಿದೆ.” ಎಂದು ವ್ಯಂಗ್ಯವಾಡಿದ್ದಾರೆ. "ಗ್ಯಾರಂಟಿ ಹಣವನ್ನು ಚುನಾವಣೆ ಬಂದಾಗ ಹಾಕ್ತಾರೆ. ಕಳೆದ ಐದು ತಿಂಗಳಿಂದ ಗ್ಯಾರಂಟಿ ಹಣ ಹಾಕಿಲ್ಲ. ಜಿಲ್ಲಾ ತಾಲ್ಲೂಕು ಪಂಚಾಯ್ತಿ ಚುನಾವಣೆ ಬಂದರೆ ಹಣ ಹಾಕ್ತಾರೆ ಅಂತಾ ಜನರು ಹೇಳ್ತಿದಾರೆ.” ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, “ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಡುಗಡೆ ಆದ ಅನುದಾನದ ಬಗ್ಗೆಯೂ ಜನರಿಗೆ ತಿಳಿಸಲಿ. ನಮ್ಮ ಸರ್ಕಾರದ ಅವಧಿಯ ಅನುದಾನ ಬಿಡುಗಡೆ ಬಗ್ಗೆಯೂ ನಾವು ಮಾಹಿತಿ ನೀಡುತ್ತೇವೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ.” ಎಂದು ಸವಾಲು ಹಾಕಿದ್ದಾರೆ. “ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ನಾವು ಮಾಡಿಲ್ಲ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು. ಸುಳ್ಳನ್ನು ಸತ್ಯ ಮಾಡಿ ಅಧಿಕಾರ ಹಿಡಿದಿದ್ದಾರೆ. ಸತ್ಯ ಸುಳ್ಳಿನ ಬಗ್ಗೆ ಜನರೇ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡ್ತಾರೆ.” ಎಂದೂ ಅವರು ಹೇಳಿದರು.

ಬಿಜೆಪಿಯಲ್ಲಿ ಯಾವುದೇ ಬಂಡಾಯವಿಲ್ಲ:

ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. "ಬಿಜೆಪಿಯಲ್ಲಿ ಯಾವುದೇ ಬಂಡಾಯವಿಲ್ಲ. ಪಾರ್ಟಿ ವಿಚಾರ ಬಂದಾಗ ನಾವೆಲ್ಲರೂ ಒಂದೇ. ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ.” ಎಂದರು. "ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ. ಬಸನಗೌಡ ಪಾಟೀಲ್ ಯತ್ನಾಳ್ ಕೂಡ ನಮ್ಮ ಪಕ್ಷದ ಸೀನಿಯರ್ ಲೀಡರ್. ಭಿನ್ನಾಭಿಪ್ರಾಯಗಳನ್ನು ರಾಷ್ಟ್ರೀಯ ನಾಯಕರು ಸರಿ ಮಾಡ್ತಾರೆ." ಎಂದು ತಿಳಿಸಿದರು. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ "ಯಾರಿಗೆ ಎಷ್ಟು ಸ್ಥಾನಮಾನ ಸಿಗಬೇಕೋ ಸಿಗುತ್ತದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮಾಡ್ತಾಳೆ. ಈ ಬಗ್ಗೆ ಏನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೀನಿ. ಹಳೆಯ ವಿಚಾರದ ಬಗ್ಗೆ ಮತ್ತೆ ಮಾತನಾಡೋದಿಲ್ಲ.” ಎಂದರು.

 

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?