Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತ, ಅಧಿಕಾರಿಗಳ ನಿರ್ಲಕ್ಷ್ಯ

ಸುವರ್ಣವಾಹಿನಿ ಸುದ್ದಿ
ಕೊಟ್ಟೂರು,ಜ,೨೫: ಕೆಲವು ವಿದ್ಯಾರ್ಥಿ ನಿಲಯಗಳು ಸಮಸ್ಯೆಗಳ ಆಗರ ಕಂತೆ ಕಂತೆ ಇರುವವಂತೆ. ನಿಲಯ ಪಾಲಕರು ಆಗೊಮ್ಮೆ, ಈಗೊಮ್ಮೆ ಬಂದು, ಕೆಲ ವಿದ್ಯಾರ್ಥಿಗಳನ್ನು ಅತಿಯಾದ ಪ್ರೀತಿ ಇರುವವರಂತೆ ತೋರಿಸಿಕೊಳ್ಳುವುದಕ್ಕಾಗಿ ಮಾತಿನ ಶೈಲಿಯಲ್ಲಿ ಅವರನ್ನು ಮಾತನಾಡಿಸುತ್ತಾ, ಮರಳು ಮಾಡುವರಂತೆ. ‘ಮೆನೋ’ ಚಾಟ್ ಪ್ರಕಾರ ಆಹಾರವನ್ನು ನೀಡದೆ, ಕೊಳೆತ, ಕಡಿಮೆ ದರದ ತರಕಾರಿ ತಂದು ಬಡ ವಿದ್ಯಾರ್ಥಿಗಳಿಗೆ ನೀಡಿ ಖುಷಿಪಡುವುದರಲ್ಲಿ ನಿಪುಣ ರಂತೆ, ವಿದ್ಯಾರ್ಥಿ ನಿಲಯ ಸಮಸ್ಯೆಗಳ ಬಗ್ಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು, ವಿದ್ಯಾರ್ಥಿ ನಿಲಯದಲ್ಲಿರುವ ಮಕ್ಕಳ ಬಗ್ಗೆ ಜಾಗೃತಿ ವಹಿಸಿ ಮಕ್ಕಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಕಾಣುವ ನಿಲಯ ಪಾಲಕರಿಗೆ ನಮ್ಮ ಸಾಮಾಜಿಕ ಮಾಧ್ಯಮದಿಂದ ಒಂದು ಸಲಾಂ ಹೇಳಿ ಬಿಡೋಣ!

ವಿಜಯನಗರ ಜಿಲ್ಲೆ, ಕೊಟ್ಟೂರು ತಾಲೂಕಿನಲ್ಲಿ ನಾಯಿಕೊಡೆಯಂತೆ ಸಾಕಷ್ಟು ವಿದ್ಯಾರ್ಥಿ ನಿಲಯಗಳು ಹುಟ್ಟಿಕೊಂಡಿವೆ ಎಂದರೆ ತಪ್ಪಾಗಲಾರದು. ಕೆಲವು ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ, ಕೆಲವು ನಿಲಯಗಳಲ್ಲಿ ಪತ್ರಕರ್ತರು ಮತ್ತು ಸಂಘ ಸಂಸ್ಥೆಯವರು ಆಹಾರ ಧಾನ್ಯಗಳನ್ನು ಮತ್ತು ತರಕಾರಿ ಪ್ರಮಾಣವನ್ನು ಪರಿಶೀಲನೆ ಮಾಡಲು ಬಿಡುವುದಿಲ್ಲವಂತೆ, ಆಗಾದರೆ ಅದರ ಕ್ವಾಲಿಟಿಯ ಪ್ರಮಾಣ ಕಂಡುಹಿಡಿಯಲು ಅಲ್ಲಿನ ನಿಲಯ ಪಾಲಕರು ಅವಕಾಶ ನೀಡುವುದಿಲ್ಲವಂತೆ, ಸರಿ ಅದು ಏನೇ ಇರಲಿ ಈಗ ನಾವು ಸ್ವಲ್ಪ ಕೊಟ್ಟೂರು ಪಟ್ಟಣದ ಕೊಟ್ಟೂರೇಶ್ವರ ವಸತಿ ಬಾಲಕರ ನಿಲಯದ ಬಗ್ಗೆ ನೋಡುವುದಾದರೆ ವಿದ್ಯಾರ್ಥಿ ನಿಲಯ ಹೊರಗಡೆ ಕಾಂಪೌAಡಿನ ಒಳಗೆ ಅಲ್ಲಲ್ಲಿ ಹೆಚ್ಚಾಗಿ ಆಹಾರವನ್ನು ಎಲ್ಲೆಂದರಲ್ಲಿ ಸಂಗ್ರಹ ಮಾಡಿರುವರಂತೆ. ಅದು ನೋಡುಗರಿಗೆ ಅಸಯ್ಯ ರೀತಿಯಲ್ಲಿ ಕಾಣುವುದಂತೆ, ಅದರ ನಿಲಯ ಪಾಲಕರಾದ ಸಂಪತ್, ಹೇಳುವ ಪ್ರಕಾರ ನಾವು ಆದಷ್ಟು ಮಟ್ಟಿಗೆ ಕಾಪಾಡಿಕೊಳ್ಳುತ್ತೇವೆ, ಈಗ ಊಟದ ಸಮಯವಾಗಿರುವುದರಿಂದ, ಹೆಚ್ಚಾಗಿರುವ ಅನ್ನ ಸಂಬಾರನ್ನು ವಿದ್ಯಾರ್ಥಿಗಳು ಹೀಗೆ ಎರಡು ಕಡೆ ಹಾಕಿದ್ದಾರೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದರು ತಮ್ಮ ವಿದ್ಯಾರ್ಥಿ ನಿಲಯದ ವೆಸ್ಟ್ ನೀರು(ಎಂಜಲು ನೀರು, ಮುಸುರೆ ನೀರು, ಕೈ ಮತ್ತು ಮೈ ತೊಳೆದ ನೀರು) ಎಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಿರುವಿರಿ ಎಂದು ಪ್ರಶ್ನೆ ಮಾಡಿದರೆ, ಅವರು ಹೇಳುವ ಉತ್ತರ ಇಷ್ಟೇ, ಗಿಡಗಳಿಗೆ ನಾವು ಬಿಡುತ್ತಿದ್ದೇವೆ. ನಾವು ಹೊರಗಡೆ ಬಿಡುವುದಿಲ್ಲ, ಯಾರು ನಿಮಗೆ ತಪ್ಪು ಮಾಹಿತಿ ನೀಡಿದ್ದಾರೆ ಹೊರಗಡೆ ನೀರು ಬಿಡುವುದು ಪರಿಶಿಷ್ಟ ಜಾತಿಯ ವಿದ್ಯಾರ್ಥಿ ನಿಲಯದಿಂದ ಹರಿಯುತ್ತದೆ. ಎಂದು ಹೇಳಿದರು. ಅದನ್ನು ನಾವು ಪರಿಶೀಲನೆ ಮಾಡಿದಾಗ, ಮುಸುರೆ ನೀರು, ಎಂಜಲ ನೀರು, ಕೈ ಮುತ್ತು ಮೈತೊಳೆದ ನೀರು ಗಿಡಗಳಿಗೆ ಬಿಟ್ಟರೆ, ಸೋಪಿನ ನೀರಿನಲ್ಲಿ ಇರುವ ಕೆಮಿಕಲ್ ಮತ್ತು ಕಾರದ ನೀರಿನಿಂದ ಗಿಡಗಳ ಪರಿಸ್ಥಿತಿ ಏನಾಗಬೇಕು ನೀವೇ ಯೋಚಿಸಿ? ಇವರೇ ಈ ಗಿಡಗಳನ್ನು ನಾಶಕ್ಕೆ ಕಾರಣ ಕರ್ತರಾಗುತ್ತಾರೆ. ಇವರು ಹೇಳುವುದನ್ನು ಕೇಳಿ ಕೆಲವು ಸಾವ೯ಜನಿಕರು, ತಮ್ಮ ಅಷ್ಟೇಕ್ಕೆ ತಾವೇ ಮಾತನಾಡಿಕೊಳ್ಳುವರಂತೆ. ಅದರ ಅರಿವಿಲ್ಲದಂತೆ ಮಾಧ್ಯಮಗಳ ಮುಂದೆ ನಾವು ಗಿಡಗಳಿಗೆ ಬಿಡುತ್ತೇವೆ ಎಂದು ನಿಲಯ ಪಾಲಕರು ಹೇಳಿದರು. ಇವರು ಗಿಡಕ್ಕೆ ಬಿಡಲಿಲ್ಲ ಅಂದರೆ, ಇಲ್ಲಿನ ‘ವೇಸ್ಟ್’ ನೀರು ಎಲ್ಲಿಗೆ ಹೋಗುತ್ತದೆ ಎಂಬುದೇ ಆಶ್ಚಯ೯ವಾಗಿದೆ. ಒಟ್ಟಿನಲ್ಲಿ ಇವರ ನ್ಯೂನತೆಗಳಿಂದ ನಿಲಯದ ಹಿಂದೆ, ಕಾಂಪೌ0ಡಿನ ಹೊರಗೆ ಸೊಳ್ಳೆ ಘಟಕದಂತೆ, ಸೊಳ್ಳೆ ತಯಾರಾಗುವುದಂತೂ ನಿಜ. ಏನಂತೀರ? ಈ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಲವಾರು ಈ ಕೊಳಚೆ ನೀರಿನಿಂದ ರೋಗಗಳು ಹರಡುವುದಕ್ಕಿಂತ ಮುಂಚಿತವಾಗಿ ಇದಕ್ಕೆ ಸಂಬ0ಧ ಪಟ್ಟ ಮೇಲಾಧಿಕಾರಿಗಳು, ಆರೋಗ್ಯ ಇಲಾಖೆಯವರು ಮತ್ತು ಪಟ್ಟಣ ಪಂಚಾಯ್ತಿಯವರು ಏನು ಕಾನೂನು ಕ್ರಮ ಜರುಗಿಸುರೋ ಕಾದು ನೋಡೋಣ!
ಮುಂದಿನ ಸಂಚಿಕೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಬಿ ಸಿ ಎಂ .ವಿದ್ಯಾರ್ಥಿ ನಿಲಯ ಹಾಗೂ ಪಟ್ಟಣ ಪಂಚಾಯತಿಯ ನಿರ್ಲಕ್ಷ್ಯದ ಬಗ್ಗೆ ವರದಿ ನೀಡಲಾಗುವುದು.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?