Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಸರಕಾರಿ ನೌಕರರ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ, ಮೇ 15-ಜೂ. 14ರ ವರೆಗೆ ಟ್ರಾನ್ಸ್‌ಫರ್‌, ಷರತ್ತುಗಳೇನು?

ಬೆಂಗಳೂರು: ಪ್ರಸಕ್ತ 2025 - 26ನೇ ಸಾಲಿಗೆ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಮೇ 15 ರಿಂದ ಜೂನ್‌ 14ರ ವರೆಗೆ ಸಮಯ ನಿಗದಿಪಡಿಸಿರುವ ರಾಜ್ಯ ಸರಕಾರ ಮಾರ್ಗಸೂಚಿಯನ್ನು ಸೋಮವಾರ ಪ್ರಕಟಿಸಿದೆ.

ಕಳೆದ ವಾರ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಗ್ರೂಪ್‌-ಎ, ಗ್ರೂಪ್‌-ಬಿ, ಗ್ರೂಪ್‌-ಸಿ ಹಾಗೂ ಗ್ರೂಪ್‌-ಡಿ ಹುದ್ದೆಗಳಿಗೆ ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ ಶೇ. 6ರ ಮಿತಿಯಲ್ಲಿ ವರ್ಗಾವಣೆಗೆ ಅವಕಾಶವಿದೆ. ಗ್ರೂಪ್‌-ಎ, ಗ್ರೂಪ್‌-ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಪಟ್ಟಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್‌-ಸಿ, ಗ್ರೂಪ್‌- ಡಿ ವೃಂದದ ನೌಕರರಿಗೆ ಸಂಬಂಧಿಸಿ ಆಯಾ ನೇಮಕ ಪ್ರಾಧಿಕಾರಗಳಿಗೆ ಅಧಿಕಾರ ನೀಡಿ ಆದೇಶ ಹೊರಡಿಸಲಾಗಿದೆ.

ವರ್ಗಾವಣೆಗೆ ಈ ಅಂಶಗಳ ಖಾತರಿ ಅಗತ್ಯ

ವರ್ಗಾವಣೆ ಜತೆಗೆ ಕಡ್ಡಾಯವಾಗಿ ಸ್ಥಳ ನಿಯುಕ್ತಿ

ಇಲಾಖಾ ವಿಚಾರಣೆ/ ಕ್ರಿಮಿನಲ್‌ ನಡಾವಳಿ ಅಥವಾ ಪ್ರಕರಣ ಬಾಕಿಯಿದ್ದವರನ್ನು ಕಾರ್ಯಕಾರಿಯೇತರ ಹುದ್ದೆಗಳಿಗೆ ಮಾತ್ರ ವರ್ಗ

ನೌಕರ ಆಸ್ಪತ್ರೆಯಲ್ಲಿ ಒಳರೋಗಿಯಾಗಿದ್ದರೆ ಅಗತ್ಯ ದಾಖಲೆ ಸಹಿತ ವೈದ್ಯ ಮಂಡಳಿ ದೃಢೀಕರಣ ಪತ್ರದೊಂದಿಗೆ ರಜೆ ಕೋರಿ ಅರ್ಜಿ ಸಲ್ಲಿಸಬಹುದು. ಅದಕ್ಕೆ ಸಕ್ಷಮ ಪ್ರಾಧಿಕಾರ ಪರಿಶೀಲಿಸಿ ರಜೆ ಮಂಜೂರು ಮಾಡಬಹುದು.

ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಹೊರರೋಗಿಯಾಗಿದ್ದರೆ ಅಥವಾ ವಿಶ್ರಾಂತಿಯಲ್ಲಿದ್ದರೆ ವರ್ಗವಾದ ಸ್ಥಳದ ಕರ್ತವ್ಯಕ್ಕೆ ಹಾಜರಾಗಿ ಸಕ್ಷಮ ಪ್ರಾಧಿಕಾರಕ್ಕೆ ರಜೆ ಅರ್ಜಿ ಸಲ್ಲಿಸಬಹುದು. ಇಲ್ಲದಿದ್ದರೆ ಸ್ಥಳಕ್ಕೆ ರಿಪೋರ್ಟ್‌ ಮಾಡಿಕೊಳ್ಳುವ ಕಾಲ ಮೀರಿದ, ಅನಧಿಕೃತ ಗೈರು ಎಂದು ಪರಿಗಣಿಸಲಾಗುತ್ತದೆ.

ಅವಧಿ ಮೀರಿ ವರ್ಗಾವಣೆಗೆ ಅವಕಾಶ

ಸೇವೆಯಿಂದ ಅಮಾನತ್ತಿನಲ್ಲಿಡುವ ಬದಲು ವರ್ಗಾಯಿಸಲು/ ಚಲನವಲನಗೊಳಿಸಲು ಉದ್ದೇಶಿಸಿದಾಗ,

ಹೊಸ ಕಚೇರಿ/ ಹುದ್ದೆಗಳನ್ನು ಸೃಜಿಸಿದಾಗ ಇಲ್ಲವೇ ನಿವೃತ್ತಿ, ಬಡ್ತಿ, ರಾಜೀನಾಮೆ, ಹಿಂಬಡ್ತಿ, ವಜಾ, ಮರಣ, ಕಡ್ಡಾಯ ನಿವೃತ್ತಿಯಿಂದ ಹುದ್ದೆ ತೆರವಾದಾಗ ಅಥವಾ ನೇರ ನೇಮಕ ಹೊಂದಿದವರನ್ನು ಮೊದಲು ನೇಮಿಸುವಾಗ, ಬಡ್ತಿ ಹೊಂದಿದವರನ್ನು ನೇಮಿಸುವಾಗ ಅಥವಾ ಯಾವುದೇ ಅನಿರೀಕ್ಷಿತ ಪರಿಸ್ಥಿತಿಯಿಂದ ಸೃಷ್ಟಿಯಾದ ಹುದ್ದೆಯನ್ನು ತಕ್ಷಣ ಭರ್ತಿ ಮಾಡಬೇಕಿದ್ದರೆ.

ವಿಶೇಷ ಇಲ್ಲವೇ ವಿವಾದಾತ್ಮಕ ಕಾರಣಕ್ಕೆ ಮಾಡುವ ವಾರ್ಷಿಕ ವರ್ಗಾವಣೆಗಳ ಸಂಖ್ಯೆಯನ್ನು ಕನಿಷ್ಠ ಮಟ್ಟಕ್ಕೆ ಸೀಮಿತಗೊಳಿಸಿ ನಿರ್ದಿಷ್ಟ ಪ್ರಕರಣಗಳಲ್ಲಿ ವರ್ಗಾವಣೆ ಅವಶ್ಯಕತೆ ಎನಿಸಿದರೆ ಕಾರಣಗಳನ್ನು ಲಿಖಿತವಾಗಿ ದಾಖಲಿಸಿ ಅಂತಹ ಪ್ರಕರಣಗಳನ್ನು ಕಡ್ಡಾಯವಾಗಿ ಸಿಎಂ ಅನುಮೋದನೆ ಪಡೆದು ವರ್ಗಾವಣೆ ಮಾಡಬೇಕು.

ನೌಕರನ ವಿರುದ್ಧ ಮೇಲ್ನೋಟಕ್ಕೆ ಗಂಭೀರ ಸ್ವರೂಪದ ದೂರು ದಾಖಲಾಗಿರುವ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಆರೋಪವಿದೆಯೆಂಬ ಬಗ್ಗೆ ಇಲಾಖಾ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದರೆ ಅಂತಹ ಪ್ರಕರಣಗಳಲ್ಲಿ ನೌಕರನಿಗೆ ದೋಷಾರೋಪ ಪಟ್ಟಿ ಜಾರಿಯಾಗಿರುವುದು ಇಲ್ಲವೇ ಸಕ್ಷಮ ನ್ಯಾಯಾಲಯದಲ್ಲಿ ಅಧಿಕಾರಿಯನ್ನು ಅಭಿಯೋಜಿಸುವ ಬಗ್ಗೆ ಅನುಮತಿ ನೀಡಿದ್ದರೆ.

 

ವರ್ಗಾವಣೆಗೆ ಕನಿಷ್ಠ ಸೇವಾವಧಿ

 

ಗ್ರೂಪ್‌-ಎ ಹುದ್ದೆಗಳು: 2 ವರ್ಷ

ಗ್ರೂಪ್‌-ಬಿ ಹುದ್ದೆಗಳು: 2 ವರ್ಷ

ಗ್ರೂಪ್‌- ಸಿ ಹುದ್ದೆಗಳು: 4 ವರ್ಷ

ಗ್ರೂಪ್‌- ಡಿ ಹುದ್ದೆಗಳು: 7 ವರ್ಷ

 

ತಮ್ಮ ಇಲಾಖೆ ವ್ಯಾಪ್ತಿಯ ಇಲಾಖೆಗಳ ಒಂದು ನಿರ್ದಿಷ್ಟ ಹುದ್ದೆಯ ಕಾರ್ಯ ಸ್ವರೂಪ/ ಸೂಕ್ಷ್ಮತೆ ಆಧಾರದ ಮೇಲೆ ಒಂದು ಹುದ್ದೆಯಲ್ಲಿ ಸರಕಾರಿ ನೌಕರ ಸೇವೆ ಸಲ್ಲಿಸಬಹುದಾದ ಕನಿಷ್ಠ ಅವಧಿಯನ್ನು ಸಚಿವಾಲಯದ ಆಡಳಿತ ಇಲಾಖೆಗಳು ಮುಖ್ಯಮಂತ್ರಿಗಳ ಪೂರ್ವಾನುಮತಿಯೊಂದಿಗೆ ಕಾಲ ಕಾಲಕ್ಕೆ ಪರಿಷ್ಕರಿಸಿ/ ನಿಗದಿಪಡಿಸಿ ಆದೇಶ ಹೊರಡಿಸಬಹುದು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಕಚೇರಿಗಳಿಗೆ ಸ್ಥಳೀಯ ವೃಂದ ಮತ್ತು ಉಳಿದ ವೃಂದಗಳಲ್ಲಿನ ನಾನಾ ವೃಂದದ ಹುದ್ದೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕ ಹೊಂದಿರುವ ನೌಕರರನ್ನು ಅವರ ನೇಮಕಾತಿ ದಿನಾಂಕದಿಂದ ಕನಿಷ್ಠ 10 ವರ್ಷಗಳವರೆಗೂ ಕಲ್ಯಾಣ ಕರ್ನಾಟಕ ಪ್ರದೇಶ ಹೊರತುಪಡಿಸಿ ವರ್ಗಾವಣೆ ಮಾಡುವಂತಿಲ್ಲ.

 

ಲಿಖಿತ ಕಾರಣ ದಾಖಲಿಸಿ ಕನಿಷ್ಠ ಸೇವಾವಧಿ ವಿಸ್ತರಣೆ/ ಕಡಿತಕ್ಕೆ ಅವಕಾಶ

ಒಂದು ಸ್ಥಳದಲ್ಲಿರಬಹುದಾದ ಕನಿಷ್ಠ ಅವಧಿಯನ್ನು ಪೂರ್ಣಗೊಳಿಸಿ ವರ್ಗಾವಣೆಗೆ ಅರ್ಹನಿರುವ ನೌಕರ ನಿವೃತ್ತನಾಗಲು ಎರಡು ವರ್ಷಕ್ಕಿಂತ ಕಡಿಮೆ ಸೇವಾವಧಿಯಿದ್ದರೆ

ವಿಶೇಷ ತಾಂತ್ರಿಕ ವಿದ್ಯಾರ್ಹತೆ ಇಲ್ಲವೇ ಅನುಭವ ಹೊಂದಿದ್ದು, ಅಂತಹ ನಿರ್ದಿಷ್ಟವಾದ ಹುದ್ದೆಗೆ ತಕ್ಷಣಕ್ಕೆ ನೇಮಿಸಲು ಸೂಕ್ತ ಬದಲಿ ನೌಕರರು ಲಭ್ಯವಿಲ್ಲದಿದ್ದರೆ

ಕೇಂದ್ರ ಸರಕಾರದ ಯೋಜನೆ ಅಥವಾ ಫ್ಲಾಗ್‌ಶಿಪ್‌ ಯೋಜನೆಗಳಲ್ಲಿರುವ ನೌಕರನನ್ನು ವರ್ಗಾಯಿಸಿದರೆ ಆ ಯೋಜನೆ ಪೂರ್ಣಗೊಳ್ಳುವಿಕೆಗೆ ಅಡ್ಡಿಯಾಗುವಂತಿದ್ದರೆ

ಪತಿ-ಪತ್ನಿ ಸರಕಾರಿ ನೌಕರರಾಗಿದ್ದು, ಅವರಲ್ಲಿಒಬ್ಬರು ವರ್ಗಾವಣೆಗೊಂಡಿದ್ದರೆ ಇನ್ನೊಬ್ಬರು ಹಾಲಿಯಿರುವ ಸ್ಥಳದಲ್ಲಿ ಕನಿಷ್ಠ ಸೇವಾವಧಿ ಪೂರೈಸದಿದ್ದರೆ ಖಾಲಿ ಹುದ್ದೆ ಲಭ್ಯತೆ ಆಧರಿಸಿ ಆ ಸ್ಥಳ ಇಲ್ಲವೇ ಸಮೀಪದ ಸ್ಥಳಕ್ಕೆ ವರ್ಗಾಯಿಸುವುದು

ನೌಕರರ ಸಂಘದ ಪದಾಧಿಕಾರಿಯಾಗಿದ್ದರೆ ಆ ಅವಧಿ ಮುಗಿಯುವವರೆಗೆ ವರ್ಗಾಯಿಸುವಂತಿಲ್ಲ. ಪದಾಧಿಕಾರದ ಅವಧಿ ಮುಗಿದ ನಂತರ 3 ತಿಂಗಳಲ್ಲಿ ಚುನಾವಣೆ ನಡೆಯದಿದ್ದರೆ ಅಂತಹವರನ್ನು ವರ್ಗಾಯಿಸಬಹುದು. ಒಂದೊಮ್ಮೆ ಮರು ಚುನಾಯಿತರಾಗಿದ್ದರೆ 2ನೇ ಅವಧಿಯವರೆಗೆ ಮಾತ್ರ ಮುಂದುವರಿಸಬಹುದು

ಮಕ್ಕಳು ಗಂಭೀರ- ಮಾರಕ ಕಾಯಿಲೆಯಿಂದ ಬಳಲುತ್ತಿದ್ದರೆ ಒಂದು ಸ್ಥಳದಲ್ಲಿ ಆ ವೈದ್ಯಕೀಯ ಚಿಕಿತ್ಸೆ ಲಭ್ಯವಿದ್ದರೆ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರವಿದ್ದರೆ

ವಿಧವೆ/ ಅವಿವಾಹಿತೆ/ ವಿಚ್ಚೇದನ ಪಡೆದು ಅವಿವಾಹಿತೆಯಾಗಿದ್ದರೆ ಖಾಲಿ ಹುದ್ದೆಯ ಲಭ್ಯತೆಗೆ ಒಳಪಟ್ಟು ಆಕೆ ಕೋರಿದ ಅಥವಾ ಹತ್ತಿರದ ಸ್ಥಳಕ್ಕೆ ವರ್ಗಾಯಿಸಬಹುದು

ಅವಧಿಪೂರ್ವ ವರ್ಗಾವಣೆ ಮಾಡುವಂತಿಲ್ಲ. ಅವಧಿಪೂರ್ವ ಇಲ್ಲವೇ ಸಾಮಾನ್ಯ ವರ್ಗಾವಣೆ ಮುಗಿದ ನಂತರ ಯಾವುದೇ ವರ್ಗಾವಣೆಗಳನ್ನು ಸಚಿವಾಲಯದ ಆಡಳಿತ ಇಲಾಖೆಗಳು ಲಿಖಿತ ಮೂಲಕ ಕಾರಣಗಳನ್ನು ದಾಖಲಿಸಿ ಸಿಎಂ ಅನುಮೋದನೆಯನ್ನು ಕಡ್ಡಾಯವಾಗಿ ಪಡೆಯಬೇಕು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳು ಮೊದಲು ವರ್ಗಾವಣೆ ಮಾಡಿ ನಂತರ ಸಿಎಂ ಸ್ಥಿರೀಕರಣ/ ಘಟನೋತ್ತರ ಅನುಮೋದನೆ ಪಡೆಯುವಂತಿಲ್ಲ

 

ವಿಕಲಚೇತನ ನೌಕರರಿಗೆ ವಿನಾಯಿತಿ

ವಿಶೇಷಚೇತನ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಯಿಂದ ವಿನಾಯಿತಿ

ವಿಶೇಷಚೇತನರು ನೇಮಕಾತಿಗೆ ಆಯ್ಕೆಯಾದ ನಂತರ ನೀಡುವ ಪ್ರಾರಂಭಿಕ ಸ್ಥಳ ನಿಯುಕ್ತಿ, ಪದೋನ್ನತಿ ನಂತರದಲ್ಲಿ ಅವರ ವರ್ಗಾವಣೆ ಅವಶ್ಯಕತೆ ಎನಿಸಿದರೆ ಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ನಿಯುಕ್ತಿ

ಸರಕಾರಿ ನೌಕರನ ಅವಲಂಬಿತ ಮಕ್ಕಳು, ಪತಿ/ ಪತ್ನಿ, ತಂದೆ-ತಾಯಿ ತೀವ್ರ ಅಂಗವೈಕಲ್ಯ ಹೊಂದಿದ್ದರೆ ಹಾಗೂ ನೌಕರ ಅವರ ನಿರ್ವಹಣೆ, ಪುನರ್ವಸತಿಯ ಜವಾಬ್ದಾರಿ ಹೊತ್ತಿದ್ದರೆ ಅವರ ದಾಖಲೆಗಳನ್ನು ಸಲ್ಲಿಸಿ ನಿಯತಕಾಲಿಕ ವರ್ಗಾವಣೆಯಿಂದ ವಿನಾಯಿತಿ ಪಡೆಯಬಹುದು. ಆ ನೌಕರನಿಗೆ ಸಾಧ್ಯವಾದಷ್ಟು ಸಮೀಪದ ಸ್ಥಳಕ್ಕೆ ನಿಯುಕ್ತಿಗೊಳಿಸಬಹುದು

ಸೇವಾವಧಿಯಲ್ಲಿ ವಿಕಲಚೇತನರಾಗಿದ್ದರೆ ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರ ಸಲ್ಲಿಸಿ ಷರತ್ತಿಗೊಳಪಟ್ಟು ಸಮೀಪದ ಸ್ಥಳಕ್ಕೆ ವರ್ಗಾಯಿಸಬಹುದು.

 

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?